kea-history
kea-history

ಮೈಸೂರಿನ ಮಹಾಜನತೆಗೆ ಕೈಗಾರಿಕೆ, ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಪ್ರದಾಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಯನ್ನು ಪರಿಚಯಿಸುವ ಉದ್ದೇಶದಿಂದ ಮೈಸೂರಿನ 23ನೇ ಮಹಾರಾಜರಾದ ಘನತೆವೆತ್ತ ಶ್ರೀ ಚಾಮರಾಜ ಒಡೆಯರ್ 10 ಇವರು 1880 ರಲ್ಲಿ ಮೈಸುರು ದಸರಾ ಉತ್ಸವವನ್ನು ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ, ಜೀವಣ್ಣರಾಯನ ಕಟ್ಟೆಯು (ಈಗ ಜೆಕೆ ಗ್ರೌಂಡ್ಸ್ ಎಂದು ಅದನ್ನು ಕರೆಯಲಾಗುತ್ತಿದೆ) ಪ್ರದರ್ಶನದ ವೇದಿಕೆಯಾಗಿತ್ತು, ನಂತರದಲ್ಲಿ ಇದನ್ನು ಮೈಸೂರು ಮೆಡಿಕಲ್ ಕಾಲೇಜು ಆವರಣಕ್ಕೆ ವರ್ಗಾಯಿಸಲಾಯಿತು. ಸಾಂಸ್ಕೃತಿಕ ಮತ್ತು ಕೈಗಾರಿಕೆಗಳ ಪ್ರದರ್ಶನ ಸಮಿತಿಯು ಅದರ ಅಧ್ಯಕ್ಷತೆಯಲ್ಲಿ 1976 ರಿಂದ 1980 ರವರೆಗೆ ಪ್ರದರ್ಶನವನ್ನು ನಡೆಸಿತು. ನಂತರ 1980 ರಿಂದ 1986 ರವರೆಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇದರ ನೇತೃತ್ವ ವಹಿಸಿದ್ದಿತು. 1972 ರವರೆಗೆ ಈ ಪ್ರದರ್ಶನವು ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ರವರ ಆಳ್ವಿಕೆಯ ಅವಧಿಯಲ್ಲಿ ತನ್ನ ಉತ್ಕೃಷ್ಟತೆಯನ್ನು ಕಂಡಿದ್ದಿತು.

ಈ ಪ್ರದರ್ಶನವು ಹಿಂದೆ ‘ಮೈಸೂರು ಪ್ರದರ್ಶನ’ ಎಂದೇ ಪ್ರಸಿದ್ಧಿ ಪಡೆದಿತ್ತು.