

ಮೈಸೂರು ಮತ್ತು ‘ದಸರಾ ಪ್ರದರ್ಶನ’ವು ಒಂದೇ ನಾಣ್ಯದ ಎರಡು ಮುಖಗಳು. ಇದು ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಸುವ ಮೈಸೂರಿನ ಆಕರ್ಷಣೆಗಳ ಪಟ್ಟಿಯಲ್ಲಿ ಒಂದಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.
1880 ರಲ್ಲಿ ಅಸ್ತಿತ್ವಕ್ಕೆ ಬಂದ ಆಗಿನ ಮಹಾರಾಜ ಶ್ರೀ ಚಾಮರಾಜ ಒಡೆಯರ್‌ರವರ ಕನಸು ಏನಿತ್ತೋ, ಇಂದು ಅದು ಬಹುದೊಡ್ಡದಾಗಿ ಬೆಳೆದು ಗಡಿಗಳನ್ನು ದಾಟಿ ಬೆಳೆದಿದೆ. ಮಳಿಗೆಗಳಿಂದ ಅಮ್ಯೂಸ್‍ಮೆಂಟ್‌ಗಳವರೆಗೆ, ಮಾಹಿತಿಯಿಂದ ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿನಿಮಯಗಳವರೆಗೆ ನೀವು ಆಕರ್ಷಣೆಗಳ ಸರಣಿಗಳನ್ನು ಕಾಣಬಹುದು. ಅಲ್ಲದೇ, 45 ದಿನಗಳಿಂದ 60 ದಿನಗಳವರೆಗಿನ ನಿಗದಿತ ಸಮಯದೊಳಗೆ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ.
ಹೊಸ ಹೊಸ ಪ್ರಯೋಗಗಳನ್ನು ಪ್ರಯತ್ನಿಸುವಾಗ, ಎರಡು ವರ್ಷಗಳ ಕೆಳಗೆ ಪ್ರಾಧಿಕಾರವು ‘ಅಮರನಾಥ ಯಾತ್ರಾ’ದ ಪ್ರತಿಕೃತಿಯನ್ನು ತರುವ ಕೆಲಸ ಮಾಡಿತು ಮತ್ತು ಪ್ರಾಧಿಕಾರದ ನಂಬಿಕೆಯನ್ನು ಇಮ್ಮಡಿ ಪಡಿಸುವಂತೆ ಇದಕ್ಕೆ ಪೂರಕವಾಗಿ ದೊರೆತ ಪ್ರತಿಕ್ರಿಯೆಯು ಅತ್ಯಧಿಕ ಪ್ರಮಾಣದಲ್ಲಿತ್ತು. 2015-16 ರಲ್ಲಿ ಪ್ರದರ್ಶನವು ‘ವಿಶ್ವದ ಏಳು ಅದ್ಭುತ’ಗಳ ಪ್ರತಿಕೃತಿಗಳನ್ನು ಅದರ ಮೂಲಗಳಿಗೆ ಸಮಾನವಾಗಿ ಸ್ಥಾಪಿಸಿದ್ದಿತು. ಪ್ರವಾಸಿಗರ ಮನದಾಳದಲ್ಲಿ ಯಾವಾಗಲೂ ಉಳಿದಿರಬೇಕೆನ್ನುವ ಆಳವಾದ ಆಶಯದೊಂದಿಗೆ ಬದಲಾದ ತಂತ್ರಜ್ಞಾನವನ್ನು ಅನುಸರಿಸುವ ಪ್ರಾಧಿಕಾರದ ಮತ್ತೊಂದು ಸಾಹಸಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ನಿಮ್ಮನ್ನು ಈ ವೆಬ್‍ಸೈಟಿಗೆ ಸ್ವಾಗತಿಸುತ್ತದೆ.
ರಾಜೇಶ್ ಜಿ ಗೌಡ. ಜಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ